Thursday, July 30, 2015

ಪಯಣದ ದಾರಿ











ಅನುದಿನವು ಜಪಿಸುವ ಹರಿನಾಮವ
ಭಕ್ತಿಯಲಿ ಬೇಡುವಾ ವರವೊಂದನು
ಆರದಿರಲಿ ಬೆಳಕು, ಸರಿಯದಿರಲಿ ಹೊಳಪು
ಹೊಮ್ಮಿರಲಿ ಸೊಬಗು, ಬಾಳ ಪಯಣಕೆ
ದಿವ್ಯ ಮುಕ್ತಿಗೆ!ಪ!

ಗಾಳಿ ಬೀಸಿದಾಗ ವಾಲಿತು ಜ್ವಾಲೆ
ಅಷ್ಟದಿಕ್ಕಿಗೆ,
ಪ್ರಕಾಶಮಾನವಾದ ಹರಿವಿನ ಮಾಲೆ
ಆತ್ಮದೊಳಗಿದೆ,
ಬಂಧುವು, ಬಳಗವು ಬಾಳ ದಾರಿಗೆ
ಬಾಳ ಪಯಣಕೆ!!

ಕಾರ್ಮೋಡ ಸರಿದಾಗ ನೀಲಿಬಾನ ತಾರೆ
ಕೈಯಬೀಸಿದೆ,
ಅರಳಿಬತ್ತಿ ಹಿಡಿಯೆಣ್ಣೆ, ಚೂರುಕಿಡಿ ಸೋಕೆ
ಜ್ಯೋತಿಯಾಗಿದೆ,
ಆರದಂತೆ ದೀಪ ಬೆಳಗ ಬೇಕು ಅಂತ
ಸ್ವಂತ ಬದುಕಿಗೆ!!


 ಶುಭಾ ಗಿರಣಿಮನೆ

Wednesday, April 8, 2015

~~ ಜಾಗರೂಕರಾಗಿರಿ ~~

~~ ಜಾಗರೂಕರಾಗಿರಿ ~~ ಹೇಸಿಗೆಯ ಜನರಯ್ಯಾ ಇವರು... ಕಂಡ-ಕಂಡವರ ತಲೆ ಚೆಂಡಾಡಿ... ತಮ್ಮ ಬೇಳೆಯ ಬೇಯಿಸಿಕೊಳ್ವರಯ್ಯಾ ಈ ನೀಚ ರಾಜಕಾರಣಿಗಳು.... ಒಳ್ಳೆಯವರಿಗಿಲ್ಲ ಕಾಲ... ಕೆಟ್ಟವರೇ ತುಂಬಿರುವ ಭೂ-ಮಂಡಲದಲಿ... ಸಿಗುವರು ಒಳ್ಳೆಯವರು ಅಲ್ಲೊಬ್ಬ-ಇಲ್ಲೊಬ್ಬರಂತೆ.... ಅವರನ್ನೂ ಚಿತೆಗೆ ಏರಿಸುವರು ಒಂದು ಸಾಕ್ಷ್ಯವೂ ಸಿಗದಂತೆ..... ಆಪ್ತರೆಂಬವರು ಹಾಕಿಕೊಡುವರಯ್ಯಾ ಲಂಚದ ಪಾಸಾಣಕೆ ಸಿಕ್ಕು.... ಮಂಚದ ಮೋಹದಿ ಬಿದ್ದು... ಹದಿ-ಹರೆಯದವರೆನ್ನದೆ ಕಾಮಾಂಧದಲಿ ಅಸುಳೆಗಳನ್ನೇ ಬಲಿ ತೆಗೆದುಕೊಳುವರು ಈ ನೀಚ ನರಭಕ್ಷಕರು.... ಅನ್ಯರಾರಾದರೂ ಬಂದೊಡನೆ ಅವರ ಮಾತಿನ ಮೋಡಿಗೆ ಸಿಲುಕದೆ ಹಾಳಾಗದಿರಿ ಓ ನಮ್ಮಯ ನಾರಿಯರೇ.... ಆ ಅನ್ಯರೇ ಉಗ್ರಗಾಮಿಗಳು ನಕ್ಸಲ್ ಗಳು ಭೂಗತ ಪಾತಕಿಗಳು ಜಿಹಾದಿಗಳು.... ಇವರುಗಳೇ ಮೋಹದ ಬಲೆಯ ಪಾಶವನು ಬೀಸಿ.... ಹಿಂದುಗಳ ನಾಶಕೆ ಬರುತಲೇ ಇದ್ದಾರೆ ಈ ನಾಮರ್ಧ ಶಿಖಾಮಣಿಗಳು.... ಗೆಳೆಯರಾದವರೆಲ್ಲ ಎಚ್ಚೆತ್ತುಕೊಂಡು ಇನ್ನಾದರೂ ಅಂಥವರ ಬಗೆಗೆ ಜಾಗರೂಕರಾಗಿರಲು ಮುಂದಿನ ದಿನಗಳಲಿ ಸೂಕ್ಷ್ಮರಾಗಿರಿ... ಇಟ್ಟಿಗಿ ಹರೀಶ್ ಕುಮಾರ್

Sunday, March 15, 2015

ಇಟ್ಟಿಗಿ ಹರೀಶ್ ಕುಮಾರ್ ಬ್ಲಾಗ್

Check out @aharishkumar82's Tweet: https://twitter.com/aharishkumar82/status/577034886462091264?s=09

Labels:

Saturday, February 21, 2015

ಪ್ರತೀ ಮನುಷ್ಯನದ್ದೂ ಜೀವನ ವೃತ್ತಾಂತದ ಕಥೆ ಇದ್ದೇ ಇರುತ್ತದೆ.

ಪ್ರತೀ ಮನುಷ್ಯನದ್ದೂ ಜೀವನ ವೃತ್ತಾಂತದ ಕಥೆ ಇದ್ದೇ ಇರುತ್ತದೆ.

ಎಲ್ಲಾ ವ್ಯಕ್ತಿಗಳ ಬಗ್ಗೆ ನಮಗೆ ಸಂಶೋಧನೆ ಮಾಡಲು ಆಗುವುದಿಲ್ಲ. ನಿಜ ಇದನ್ನು ಎಲ್ಲರೂ ಒಪ್ಪಬಹುದಲ್ಲವೇ? ಒಪ್ಪಲೇಬೇಕು...

ನಾವುಗಳು ಯಾವಾಗಲೂ ಜೀವನದಲ್ಲಿ ಗುರಿ ಮುಟ್ಟಿದವರ ಅಥವಾ ಗುರಿ ಮುಟ್ಟದೆ ಇರುವಂಥವರ ಕಥೆಗಳನ್ನು ಇತಿಹಾಸಪೂರ್ವದಿಂದಲೂ ಕೇಳುತ್ತಾ ಮತ್ತು ಓದುತ್ತಾ ಬಂದಿದ್ದೇವೆ. ಅದು ಬೇಡ ಅಂತ ಹೇಳಲು ನಾವ್ಯಾರು? ನಿಜ ಅದರ ಜೊತೆಗೆನೆ ನಮ್ಮ-ನಮ್ಮಲ್ಲಿರುವ ಅಕ್ಕ-ಪಕ್ಕದವರ ಜೀವನದ ಕಥೆಗಳನ್ನು ಹಾಗೂ ಅವರ ಜೀವನದ ವೃತ್ತಾಂತಗಳ ಪುಟಗಳನ್ನು ತಿರುವಿ ಹಾಕಿ ನೋಡಿದರೆ ಈ ಮೊದಲೇ ಮೇಲೆ ಹೇಳಿದ್ದೀವಲ್ಲಾ ಗುರಿ ಮುಟ್ಟಿದವರು ಮತ್ತು ಮುಟ್ಟದೆ ಇರುವವರ ಜೀವನ ವೃತ್ತಾಂತಗಳಿಗಿಂತಲೂ ನಮ್ಮ ಸುತ್ತ-ಮುತ್ತಲಿನವರ ಜೀವನ ವೃತ್ತಾಂತಗಳು ತುಂಬಾ ಅನುಭವ ಮತ್ತು ಒಳ್ಳೆಯ ಬೆಳಕಿನಡೆಗೆ ಸಾಗಲು ದಾರಿದೀಪವಾಗುತ್ತವೆ.

ಇದನ್ನು ಬೇಕಿದ್ದರೆ ನೀವುಗಳು ಹದಿನೈದು ದಿನಗಳಲ್ಲಿ ಪರೀಕ್ಷೆ ಮಾಡಿ ನೋಡಿ ಹಾಗೂ ಅದರಿಂದ ನಿಮಗೆ ಅನೇಕ ಬಗೆಯ ಅನುಕೂಲತೆಗಳು ಮತ್ತು ದಾರಿಗಳು ಲಭಿಸುತ್ತವೆ.

ಯಾವ ಒಬ್ಬ ಸಾಧಾರಣ ವ್ಯಕ್ತಿಯೂ ಸಹ ಕೆಲಸಕ್ಕೆ ಬಾರದವನಲ್ಲ. ಅವನು ಕೆಲಸ ಮಾಡಿದರಷ್ಟೇ ಕೆಲಸಕ್ಕೆ ಬರುವವನು ಎನ್ನುವುದಾದರೆ ಭಿಕ್ಷುಕನು ಸಹ ಅವನು ಭಿಕ್ಷೆ ಬೇಡಿದರೂ ಅವನಿಗೆ ಗೊತ್ತಿಲ್ಲದ ಕಾರ್ಯದಲ್ಲಿ ಯಾವುದೋ ರೀತಿಯಿಂದ ಅವನಿಗರಿವಿಲ್ಲದೆಯೇ ಕೆಲಸಮಾಡುತ್ತಲೇ ಇರುತ್ತಾನೆ.

ಹೀಗೇ ಹೇಳಲು ಹೊರಟರೆ ನಮಗೆ ಅನೇಕ ವ್ಯಕ್ತಿಗಳ ಸಮಾಗಮವಾಗಿರುತ್ತದೆ ದಿನಬೆಳಗಾದರೆ. ಒಬ್ಬ ವ್ಯಕ್ತಿ ಬಸ್ ಅಲ್ಲಿ ಪ್ರಯಾಣಿಸುವಾಗ ತುಂಬಾ ಜನರಿಂದ ತುಂಬಿ ಹೋಗಿದ್ದ ಆ ಬಸ್ ಮತ್ತು ಚಾಲಕ ನಿರ್ವಾಹಕರು ಮಹಿಳೆಯರು ಪುರುಷರು ಮಕ್ಕಳು ವಯಸ್ಸಾದವರು ಅಂಗವಿಕಲರು ಬಗೆ ಬಗೆಯ ಜನರ ದರುಶನವಾದರೂ ಸಹ ಆ ವ್ಯಕ್ತಿಯ ತಲೆಯಲ್ಲಿ ಏನೋ ಒಂದು ಕೊರೆತ. ಅದು ಸಾಧಾರಣವೋ ಅಸಾಧಾರಣವೋ ಎನ್ನುವುದು ಸಮಂಜಸವಲ್ಲ. ಆದರೂ ಆ ವ್ಯಕ್ತಿಯ ತಲೆಯಲ್ಲಿ ನೂರಾರು ಆಲೋಚನೆಗಳು, ಕೆಲಸಕ್ಕೆ ಹೋಗುವ ಕಾತುರ, ಮಕ್ಕಳ ಶಾಲೆಯ ಚಿಂತೆ, ಮನೆಯಲ್ಲಿ ಮಡದಿಯ ಬಗ್ಗೆ ಇನ್ನೊಂದು ಚಿಂತೆ, ಬಸ್ ಅಲ್ಲಿ ತುಂಬಾ ಜನರಿದ್ದರಿಂದ ಅವನಿಗೆ ನಿಲ್ಲಲೂ ಆಗದ ಕೂರಲೂ ಆಗದ ಪರಿಸ್ಥಿತಿಯ ನಡುವೆ ಈ ಜೀವನ ಯಾವಾನಿಗೆ ಬೇಕಪ್ಪ? ಎನ್ನುವ ಪ್ರಶ್ನೆಯನ್ನು ದಿನಾಲು ಅಂದುಕೊಂಡು ಜೀವನ ನಡೆಸುವವನಿಗೆ, ಅವನ ಕಛೇರಿಯಲ್ಲಿ ಅವನ ಬಾಸ್ ಅವನ ದಕ್ಷತೆ ಮತ್ತು ಪ್ರಾಮಾಣಿಕತೆ ಮತ್ತು ಕೆಲಸದಲ್ಲಿನ ಚಾಣಾಕ್ಷತೆಗಳನ್ನು ಗ್ರಹಿಸಿ Promotion ಕೊಟ್ಟು ಹಾಗು ಓಡಾಡಲು ಒಂದು ಕಾರು ಉಳಿಯಲು Double Bed Room ಮನೆ ಹೀಗೆ ಸೌಲಭ್ಯಗಳನ್ನು ಒದಗಿಸಿದಾಗ ಅವನಿಗಾದ ಸಂತಸ ಅಷ್ಟಿಷ್ಟಲ್ಲ. ಹಾಗೆಂದ ಮಾತ್ರಕ್ಕೆ ಅವನಿಗೆ ಜಂಬವೂ ದುಷ್ಟಬುದ್ಧಿಯೂ ಇರಲಿಲ್ಲ.

ಹೀಗೆ ಅವನು ಕೆಲಸಕ್ಕೆ ಹೋಗಲು ಅಣಿಯಾಗಿ ತನ್ನ ಮಕ್ಕಳನ್ನೂ ಸಹ ಅವರ ಬಾಸ್ ಕೊಟ್ಟ ಕಾರಲ್ಲಿ ಕೂರಿಸಿಕೊಂಡು ಅವರಿಗೆ ಶಾಲೆಯವರೆಗೆ ತಲುಪಿಸಿ ತಾನು ದಿನಾಲು ಹತ್ತುತ್ತಿದ್ದ ಬಸ್ ನಿಲ್ದಾಣದಲ್ಲಿ ಒಮ್ಮೆ ನೋಡಿ ಮತ್ತು ಅವನು ದಿನಾಲೂ ಪ್ರಯಾಣಿಸುತ್ತಿದ್ದ ಬಸ್ ಅನ್ನು ಸಹ ನೋಡಿ ತುಂಬಾ ಬೇಜಾರು ಮಾಡಿಕೊಂಡ. ಹಾಗೂ ಆ ಬಸ್ ಅಲ್ಲೇ ಅವನ ಮೂರು ನಾಲ್ಕು ಸ್ನೇಹಿತರು ಪ್ರಯಾಣಿಸುತ್ತಿದ್ದರು. ತಕ್ಷಣವೇ ಅವನು ಬಸ್ ನಿಂತ ಜಾಗದಲ್ಲಿ ಕಾರನ್ನು ನಿಲ್ಲಿಸಿ ಅವರ ಸ್ನೇಹಿತರನ್ನು ಬಸ್ ಇಂದ ಇಳಿಸಿ ಅವನ ಆಫೀಸಿನ ಕಾರಲ್ಲಿ ಕುಳ್ಳಿರಿಸಿಕೊಂಡು ಆಫೀಸಿನತ್ತ ಹೊರಟರು. ಇದೇ ರೀತಿ ದಿನಾಲೂ ನಡೆಯುತ್ತಾ ಹೋಯ್ತು. ಅವನ ಸ್ನೇಹಿತರು ತುಂಬಾ ಖುಷಿ ಪಟ್ಟು ಅವನ ಸಹಾಯದ ಗುಣವನ್ನು ಹೊಗಳುತ್ತಾ ಹಾಗೇ ದಿನ ಕಳೆಯುತ್ತಾ ನಡೆದರು ಮತ್ತು ಅವರ ಸ್ನೇಹಿತನು ಮೇಲಕ್ಕೇರುತ್ತಾ ಬಂದನು...........................

ಇಷ್ಟು ಸಾಕೆನಿಸುತ್ತದೆ....

ಧನ್ಯವಾದಗಳು,

ಇಟ್ಟಿಗಿ ಹರೀಶ್ ಕುಮಾರ್

Labels:

Friday, December 5, 2014

ದೇವ್ರನ್ನ ಹುಡುಕ್ಬೇಡ


ಗುಡಿಗ್ಯಾಕೆ ಹೋಗ್ತಿಯೊ ಗುಂಡಣ್ಣ
ಕಲ್ಲಿನ ಮೂರುತಿ ಅಲ್ಲೈತೊ
ಹೆತ್ತ ದೇವ್ರಿಗೆ ಕೈ ಮುಗಿದು
ಮನೆಯೇ ಗುಡಿ ಎಂದು ತಿಳಿಯಣ್ಣ !!
ದೇವ್ರು ಸೆರೆಮನೇಲಿ ಕುಂತವ್ನೆ
ನಿನಗೆಂಥ ವರವನ್ನು ಕೊಟ್ಟಾನು
ತುಪ್ಪವ ಕಲ್ಮೇಲೆ ಸುರಿತೀಯ
ಹಸಿದವನ್ಗೆ ಗಂಜೀಯ ಕೊಡಲೊಲ್ಲೆ !!
ಕಲ್ಲಿಗೆ ನಮಸ್ಕಾರ ಮಾಡೋಕೆ
ಮಾಲೆಯ ಹಾಕೊಂಡು ತಿರುಗ್ಬೇಕೆ
ಹೆತ್ತವ್ರ ನೋಡೋಕೆ ಮುನಿಸ್ಕೊಂಡು
ಗುಡಿಯೊಳ್ಗೆ ಹೋಗ್ಲಿಕ್ಕೆ ಹಾರ್ಬೇಕೆ !!
ಮಡೆಸ್ನಾನ ಪುಣ್ಯ ಅಂದ್ಕೊಂಡು
ಕಂಡವ್ರ ಎಂಜ್ಲಲ್ಲಿ ಉರುಳಾಡ್ತಿ
ತಿಂದ್ಬಿಟ್ಟ ಅನ್ನವ ತಿನ್ನೋವನ್ಗೆ
ಕಾಲಿಂದ ಒದ್ದು ಹೊರಗಾಕ್ತಿ !!
ಮಾಡಿದ ಪಾಪವು ಬೆನ್ಹಿಂದೆ
ನೆರಳಂತೆ ಬರೋದು ನಿಜ್ವಂತೆ
ಪುಣ್ಯವ ಮಾಡ್ದವ್ನಿಗೆ ಸಿಗ್ತಾರೆ
ಚಟ್ಟವ ಹೊರಲಿಕ್ಕೆ ನಾಕು ಜನ !!
ಇದ್ದಾಗ ಕೊಡ್ಬೇಕು ದೀನ್ರಿಗೆ
ಪ್ರೀತಿಯ ತೋರ್ಬೇಕು ಎಲ್ರಿಗೆ
ಆಗ ಹುಡ್ಕೊಂಡು ದೇವ್ರು ಬರ್ತಾನೆ
ಮನಸೆಂಬ ಗುಡಿಯಲ್ಲಿ ನೆಲೆಸ್ತಾನೆ !!
ದೇವ್ರನ್ನ ಹುಡುಕ್ಬೇಡ ಗುಂಡಣ್ಣ
ನಿನ್ನೊಳಗೆ ಅವ್ನು ಬಂದಾನು
ಒಳ್ಳೆಯ ಕೆಲ್ಸವ ನೀ ಮಾಡು
ಅವ್ನೆದ್ದು ಕೈ ನಿನ್ಗೆ ಮುಗಿದಾನು !!

ವಿಜಯ್ ಕುಮಾರ್

Labels:

Thursday, December 4, 2014

ಪೇಸ್ ಬುಕ್ ಅವಾಂತರ.

ಶುಭಾ ಗಿರಣೀಮನೆ
ಯಲ್ಲಪುರ,ಉತ್ತರ ಕನ್ನಡ.

   ನಾನು ಇನ್ನು ಒಂಟಿಯಾಗಿ ಮನೆಯಲ್ಲಿ ಇರಬೇಕು. ಗಂಡ ಮಕ್ಕಳಿಗೆ ತಿಂಡಿ ತಿನ್ನಿಸಿ ತಯಾರಿ ಮಾಡಿ ಮನೆಯಿಂದ ಕಳಿಸಿ, ಬಾಗಿಲನ್ನು ಭದ್ರವಾಗಿ ಹಾಕಿದ್ದಾಯಿತು. ಆದರೆ ಇಂದು ಒಂದು ಕಡೆ ಮನಸ್ಸು ನೆಲೆ ನಿಲ್ಲುತ್ತಲೇ ಇಲ್ಲ. ಯಾವ ಕೆಲಸ ಮಾಡಬೇಕು, ಛೇ ಗೊತ್ತಾಗುತ್ತಲೇ ಇಲ್ಲ.  ಒಂತರ  ಎಲ್ಲವೂ ಗೊಂದಲ.
  ಹೌದು ಅವನು ಬಂದು ಬಿಟ್ಟರೆ? ಅಯ್ಯೋ ದೇವರೆ, ಹಾಗೇನಾದರೂ ಬಂದರೆ ನಾನು ಏನು ಹೇಳಬೇಕು? ಸುತ್ತ ಜನ ಏನೇಂದುಕೊಂಡಾರು? ಛೀ ನಾನು ಮಾತನಾಡಲೇ ಬಾರದಿತ್ತು. ಹೌದು ಅವನು ಹೇಗೆ ಬರುತ್ತಾನೆ. ನಾನು ವಿಳಾಸವನ್ನು ಕೊಟ್ಟಿಲ್ಲವಲ್ಲ. ಆದರೂ ಅದು ಹೇಗೆ ನನ್ನ ಮನೆಯ ವಿಳಾಸ ಹೇಳಿದ. ಕೆಲವು ದಿನದ ಪರಿಚಯ.
   ನಾನು ಈ ಪೇಸ್ ಬುಕ್  ಉಪಯೋಗಿಸಬಾರದಿತ್ತು. ಮನೆಗೆ ಕಂಪ್ಯೂಟರ್ ತಗೊಂಡು ಬನ್ನಿ ಎಂದಿದ್ದೆ ತಪ್ಪಾಯಿತು. ಮಕ್ಕಳು ಕಲಿಯುತ್ತಾವೆ. ಈಗಿನ ಕಾಲದಲ್ಲಿ ಎಲ್ಲರ ಮನೆಯಲ್ಲೂ ಕಂಪ್ಯೂಟರ್ ಇರೊದು ಸಹಜ. ಹಾಗೆ ನನ್ನ ಮನೆಯಲ್ಲಿ ಇರಲಿ ಎಂದು ಬಯಸಿದ್ದು ತಪ್ಪಾ.   ನಂಗೆ ಈ ಕಂಪ್ಯೂಟರ್ ಬಗ್ಗೆ ಗೊತ್ತೆ ಇರಲಿಲ್ಲ. ಇವರು ಒತ್ತಾಯ ಮಾಡಿ ಕಂಪ್ಯೂಟರ್ ಕಲಿ ಎಂದರು. ನನಗೂ ಹೊಸ ಉಮೇದು. ಕಲಿತೆ, ಇಂಟರ್ ನೆಟ್ ಹಾಕಿಸಿಕೊಂಡೆ, ಹೊಸ ಹೊಸ ವಿಚಾರಗಳು, ವಿಶೇಷತೆಗಳು ತಿಳಿಯುತ್ತಾ ಹೋದವು.
   ಪೇಸ್ ಬುಕ್ ಅಕೊಂಟ್ ಅವಿನಾಶ್  ತೆಗೆದುಕೊಟ್ಟಿದ್ದು.  ಅಬ್ಬಾ ಎಷ್ಟೋಂದು ಖುಶಿ. ಎಷ್ಟೆಲ್ಲ ಸ್ನೇಹಿತರು. ಎಲ್ಲರು ಎಷ್ಟು ಚೆನ್ನಾಗಿ ಮಾತನಾಡುತ್ತಾರೆ. ಆದರೆ ಅವಿನಾಶ್ ಹೇಳಿದಂಗೆ ಯಾರಿಗೂ ನನ್ನ ಪೋನ್ ನಂಬರ್ ಮಾತ್ರ ಕೊಟ್ಟಿರಲಿಲ್ಲ. ಆತನೊಬ್ಬ ಅದೇನೆನೋ ಕೆಟ್ಟದಾಗಿ ಮಾತನಾಡಿಸಿದ್ದ. ನಾನು ಅವಿನಾಶ್ ಗೆ  ಕೇಳಿದ್ದೆ ಏನು ಮಾಡಲಿ ಅಂತ. ಆಗ ಅವಿನಾಶ್ ನಂಗೆ ಬ್ಲಾಕ್ ಮಾಡುವುದನ್ನು ಹೇಳಿಕೊಟ್ಟಿದ್ದರು. ಅಲ್ಲಿಂದ ಒಂದೊಂದೆ ಅನುಭವವಾಗಿ, ಯಾರಿಗೂ ನನ್ನ ಯಾವ ವಿವರಣೆಯನ್ನು ನೀಡಿರಲಿಲ್ಲ.
 ಆದರೆ ಇತನಿಗೆ ಹೇಗೆ ತಿಳಿಯಿತು. ನನ್ನ ಊರು, ಮಕ್ಕಳು, ಗಂಡ, ಪೋನ್ ನಂಬರ್ ಎಲ್ಲವೂ.  ಪೇಸ್ ಬುಕ್ಕಲ್ಲಿ ಏಷ್ಟು ಸಲ ಕೇಳಿದ್ದ ನನ್ನ ಪೋನ್ ನಂಬರ್. ನಾನು ಕೊಟ್ಟಿರಲಿಲ್ಲ. ಹಾಗಂತ ಕೆಟ್ಟದಾಗಿ ಮಾತನಾಡಿರಲಿಲ್ಲ. ಪೋಟೊ ಕೊಡು ಅಂತಿದ್ದ. ಅವನು ಮತ್ತೆ ಮತ್ತೆ ಕೇಳಿದಾಗ ಬೇಸರವಾಗಿ ನಾನೇ ಬ್ಲಾಕ್ ಮಾಡಿದ್ದೆ. ಕೆಲವು ದಿನದ ಪರಿಚಯದಲ್ಲಿ ಅವನೇಕೆ ಹೀಗೆ ಕಾಡುತ್ತಿದ್ದಾನೆ. ನನ್ನ ನೋಡಿಲ್ಲ. ನನ್ನ ದ್ವನಿಯನ್ನು ಕೇಳಿರಲಿಲ್ಲ. ಎರಡು ಮಕ್ಕಳ ತಾಯಿ ಅಂತ ಗೊತ್ತು. ಆದರು ಆದರು..... ಅವನು ಏನಂದ. ಹಾ ನನ್ನ ಪ್ರ‍ೀತಿ ಮಾಡುತ್ತಿಯಾ ಅಂತ. ಅಬ್ಬ ಏಷ್ಟು ಧೈಯ೯. ಮದುವೆ ಆದವಳ ಬಳಿ ಕೇಳುವ ಮಾತಾ ಅದು.
 ಮೊನ್ನೆ ಮಧ್ಯಾಹ್ನ ಊಟ ಮಾಡಿ ಒಂದು ಸ್ವಲ್ಪ ಹೊತ್ತು ಮಲಗೋಣ ಅಂತ ರೂ೦ ಹೊರಟಾಗ, ಆ ಪೋನ್ ರಿಂಗಣಿಸಿತ್ತು. ಎಂದಿನಂತೆ ಹೋಗಿ ರಿಸಿವರ್ ಎತ್ತಿದ್ದೆ.
 "ಚೆನ್ನಗಿದ್ದಿರಾ ಚಿನ್ನು?" ಎನ್ನುವ ಅಪರಿಚಿತ ದ್ವನಿ. " ಯಾರು ?" ಎಂದಾಗ, ಆ ಕಡೆ ಮಧುರವಾದ ನಗು. ನನಗೂ ನಗು ಬಂದಿತ್ತಾದರೂ ತೋರಿಸದೆ " ನೀವು ಯಾರು ಅಂತ ಮತ್ತೆ ಕೇಳಿದ್ದೆ.
 " ನಾನು ಚಿನ್ನು ರಂಗನಾಥ. ನಿನ್ನ ಪೇಸ್ ಬುಕ್ಕ್ ನ ಗೆಳೆಯ." ಎಂದಾಗ ನಂಗೆ ಅದಾವುದೋ ಭಯವಾಗಿತ್ತು. ಹೌದು ಅವನು ಹೇಳಿದ್ದ. ನಾನು ನಿನ್ನ ಮನೆ ವಿಳಾಸ ಮತ್ತು ಪೋನ್ ನಂಬರನ್ನು ಹುಡುಕ್ತಿನಿ ಅಂತ. ಹೇಗೆ ಅ೦ತ ಕೇಳಿದಾಗ, ಒಂದು ವಾರ ಟೈಮ್ ಕೊಡು ಹುಡುಕ್ತಿನಿ ಅಂದಿದ್ದ. ಅದೇ ದಿನ ಇವನ ಸಹವಾಸ ಬೇಡ ಅಂತ ಬ್ಲಾಕ್ ಮಾಡಿದ್ದೆ.
 ಆದರೆ ಮೊನ್ನೆ ಪೋನ್ ನಲ್ಲಿ " ನಿನ್ನ ಗಂಡನಿಗೆ ಹೇಳ್ತಿನಿ, ನಾನು ನಿಮ್ಮವಳನ್ನ ತುಂಬಾ ಪ್ರೀತಿಸ್ತಿನಿ ಅಂತ. ಅವರನ್ನ ನಾನು ಕೇಳುವ ರೀತಿಲಿ ಕೇಳಿದ್ರೆ ಬಿಟ್ಟು ಕೊಡುತ್ತಾರೆ." ಎಂದ ಆ ರಂಗನಾಥ. ನಾನ್ಯಾಕೆ ಆಗ ಅವನಿಗೆ ಬರಬೇಡ ನನ್ನ ಮನೆಗೆ ಅನ್ನಲಿಲ್ಲ. ಇಲ್ಲ ಇಂದು ಬರುತ್ತಾನೆ ಏನು ಮಾಡಲಿ? ಹನ್ನೊಂದು ಗಂಟೆಗೆ ಬರುತ್ತೇನೆ ಅಂದಿದ್ದಾನೆ. ಈಗ ಗಂಟೆ ಎಷ್ಟು?. ಹನ್ನೆರಡು ಗಂಟೆ. ಇನ್ನೂ ಬಂದಿಲ್ಲ. ಏನಾದರಾಗಲಿ ನಾನು ಬಾಗಿಲು ತೆರೆಯಲೇ ಬಾರದು. ಯಾವ ರಂಗನಾಥನೋ ಬಂದರೆ ಸರಿಯಾಗಿ ಬೈದು ಕಳಿಸಿ ಬಿಡುತ್ತೇನೆ.
 ಯಾಕೋ ರಾತ್ರಿಯೂ ಸರಿಯಾಗಿ ನಿದ್ದೆ ಬರಲಿಲ್ಲ. ಆ ಹಾಳಾದ ರಂಗನಾಥನ ಮಾತೇ ನೆನಪಾಗುತಿತ್ತು. ಒಂದಿಷ್ಟು ಹೊತ್ತು ಹಾಗೆ ಮಲಗೋಣ. ದೇವರೆ ಇಂದು ಅವನು ಬರದಂತೆ ನೋಡಿಕೊ. ಅಲ್ಲ ಎಂದೂ ಅವನು ಬರದಂತೆ ನೋಡಿಕೊ. ಅರೆ! ಬಾಗಿಲು ಬಡಿದ ಶಬ್ದವಾಯಿತು. ಯಾರು ಬಂದರು. ಅವನು ಬಂದನೆ . ಅಯ್ಯೋ ನನ್ನ ಕೈ ಕಾಲುಗಳು ನಡುಗುತ್ತ ಇದೆ. ಬಾಗಿಲು ತೆರೆಯುವುದೇ ಬೇಡ. ಹಾಗೆ ಬಡಿದು ಸುಸ್ತಾಗಿ ಹೊರಟು ಹೋಗಲಿ. ಆದರೆ ಬೇರೆಯಾರದರು ಆಗಿದ್ದರೆ?
 ಮತ್ತೆ ಮತ್ತೆ ಬಡಿಯುತ್ತಿದ್ದಾರೆ. ಒಮ್ಮೆ ಆ ಕಿಟಕಿಯಲಿ ನೋಡಿ ಬಿಡುವುದು ಸರಿ.
    ಅರೇ! ನನ್ನ ಅವಿನಾಶ್ ಅಲ್ಲವೆ? ಛೇ ಕಿಟಕಿಯಿಂದ ನೋಡದಿದ್ದರೆ ಅನಾಹುತವಾಗುತಿತ್ತು. ಇನ್ನು ಭಯವಿಲ್ಲ. ನನ್ನ ಮೇಲೆ ಅವಿನಾಶ್ ಗೆ ನಂಬಿಕೆ ಇದೆ. ಸರಿಯಾಗಿ ಬೈದು ಕಳಿಸ್ತಾರೆ. ಹೋ ರಂಗಮ್ಮನ ಮಗ ಜಗನಾಥ ಜೊತೆಯಲ್ಲಿದ್ದಾನೆ. ಊಟ ಮಾಡಿಕೊಂಡು ಹೋಗುತ್ತಾರೆ. ಇಬ್ಬರು ಹಳೆಯ ಸ್ನೇಹಿತರು.
 ***
ಹೌದು ಊಟವಾಯಿತು. ಇವರು ಈಗ ಹೊರಟು ಹೋದರು. ಮತ್ತೆ ಒಂಟಿ. ಏನು ಮಾಡಲಿ? ಪಕ್ಕದ ಮನೆಗೆ ಹೋಗಲೇ. ಬೇಡಾ. ಮಕ್ಕಳು ನಾಲ್ಕು ಗಂಟೆಗೆ ಮನೆಗೆ ಬಂದು ಬಿಡುತ್ತವೆ. ಅವರಿಗೆ ತಿಂಡಿ, ಹೋಮ್ ವಕ್೯ ಮಾಡಿಸಬೇಕು.  ಆದರೆ ಮಕ್ಕಳಿರುವಾಗ ಬಂದರೆ ಏನು ಮಾಡಲಿ? ಅಯ್ಯೋ ಇಗಲೆ ಬಂದಿದ್ದರೆ ಒಂದಿಷ್ಟು ಬೈದು ಕಳಿಸಬಹುದಿತ್ತು. ಮಕ್ಕಳೆದುರು ಪೇಸ್ ಬುಕ್ ವಿಚಾರ ಹೇಳಿದರೆ. ಮಕ್ಕಳು ಬಂದರು. ಅವನು ಬರದಿದ್ದರೆ ಸಾಕು.
  ಅಬ್ಬಾ ಬರಲಿಲ್ಲ ಈಗ ರಾತ್ರಿ ಅಯಿತು. ಮಕ್ಕಳು ಮಲಗಿ ಬಿಟ್ಟವು. ಇಂದು ಯಾಕೋ ಅವಿನಾಶ್  ಕೂಡ ಮಲಗಿಬಿಟ್ಟ. ಆದರೆ ಅವನು ನಾಳೆ ಬಂದರೆ ಏನು ಮಾಡುವುದು. ಯಾಕೊ ಹೊಟ್ಟೆಯಲ್ಲಿ ಸಂಕಟ. ಪೋನ್ ರಿಂಗಾಗುತ್ತಿದೆ. ಈ ರಾತ್ರಿ ಯಾರೋ,
 "ಹಲೋ.."
"ಚಿನ್ನಾ ನಾನು ರಂಗನಾಥ. ಇವತ್ತು ತುಂಬಾ ಚೆನ್ನಗಿ ಕಣಿಸ್ತಿದ್ದೆ ನೀನು." ಆ ಮಧುರವಾದ ದ್ವನಿ
" ನೀವು ಎಲ್ಲಿ ನೋಡಿದ್ರಿ ನನ್ನ?"
 " ನಾನು ನಿಮ್ಮ ಮನೆಗೆ ಬಂದಿದ್ದೆನಲ್ಲ ಇಂದು."
"ಸುಳ್ಳು ಹೇಳಬೇಡಿ. ನಾನು ನನ್ನ ಗಂಡನಿಗೆ ಹೇಳಿ ಬಿಡುತ್ತೇನೆ"
ಸುಳ್ಳು ಹೇಳುತ್ತಿಲ್ಲ, ನೀನೆ ಊಟ ಬಡಿಸಿದ್ದಿಯಾ ನಂಗೆ, ನಿನ್ನ ಗಂಡನ ಬಾಲ್ಯ ಸ್ನೇಹಿತ ಜಗನ್ನಾಥ ಕಣೆ ನಾನು."
"ಅದು.. ಅದು ರಂಗನಾಥ?"
"ರಂಗಮ್ಮನ ಮಗ ಜಗನ್ನಾಥ. ಅಮ್ಮ ನನ್ನಿಂದ ದೂರವಾದ ಮೇಲೆ ಅಮ್ಮನ ಹೇಸರನ್ನ ನನ್ನ ಹೇಸರಲ್ಲಿ ಪೊಣಿಸಿದೆ. ರಂಗನಾಥ ಅಂತ"
"ಮತ್ತೆ ಯಾಕೆ ನನ್ಗೆ ಮೊದಲೇ ಹೇಳಲಿಲ್ಲ.
"ನಾನು ನಿನ್ನ ಮೊದಲು ಒಮ್ಮೆ ನೋಡಿದ್ದೆ. ಆಗ ಮದುವೆ ಅಗಿರಲಿಲ್ಲ ನಿಂಗೆ. ನಿನ್ನ ನೋಡಿದಾಗ ಮನಸಿಗೆ ಹಿಡಿಸಿತ್ತು. ಮದುವೆ ಆಗೋಣ ಅಂದುಕೊಂಡಿದ್ದೆ. ಹಾಗೆ ನಾನು ಮುಂಬಾಯಿಗೆ ಹೋಗುವ ಸಂದಭ೯ ಬಂದಿದ್ದರಿಂದ ಮನೆಯಲ್ಲಿ ನಿನ್ನ ವಿಚಾರ ತಿಳಿಸಲಿಲ್ಲ. ಆದರೆ ನಾನು ವಾಪಸ್ ಮೂರು ತಿಂಗಳಲ್ಲಿ ಬರುವ ಹೊತ್ತಿಗೆ ನಿನ್ನ ಅವಿನಾಶ್ ಮದುವೆ ಆಗಿ ಹೋಗಿತ್ತು. ಆಮೇಲೆ ನಂಗು ಮದುವೆ ಅಯಿತು. ಮಕ್ಕಳಾದರು. ಪೇಸ್ ಬುಕ್ ನಲ್ಲಿ ನಿನ್ನ ಹೆಸರು ಕಾಣಿಸಿತು. ಹಾಗೆ ಮಾತನಾಡಿಸಿದೆ. ಅಷ್ಟೆ. ಬೇಸರ ಮಾಡಿಕೊಳ್ಳಬೇಡಾ. ಈಗ ರಾತ್ರಿ ಆಯಿತು. ನಾಳೆ ಪೋನ್ ಮಾಡುತ್ತೇನೆ. ನಿನ್ನ ಲವ್ವರ್ ಆಗಿ ಅಲ್ಲ. ಒಳ್ಳೆಯ ಸ್ನೇಹಿತನಾಗಿ ಇರುತ್ತೇನೆ." ಎಂದು ಹೇಳಿದವನು ಮಾತು ನಿಲ್ಲಿಸಿಬಿಟ್ಟ.
  ಅಬ್ಬಾ ಎಂತ ಹೆದರಿಕೆಯಾಗಿತ್ತು. ಅಂತು ಸಮಸ್ಯೆ ಬಗೆ ಹರಿಯಿತಲ್ಲ. ಮೂರು ದಿನದಿಂದ ನಿದ್ದೆಯಿಲ್ಲ, ಊಟ ಸರಿಯಾಗಿ ಮಾಡಿಲ್ಲ ಇವನ ಯೋಚನೆಯಲ್ಲಿ ಸುಸ್ತಾಯಿತು. ನಾಳೆ ಪೋನ್ ಮಾಡಿದಾಗ ಹೇಳಬೇಕು. ಇನ್ನು ಯಾವ ಹೆಣ್ಣಿಗೂ ಈ ರೀತಿಯಾಗಿ ತೊಂದರೆ ಕೊಡಬೇಡ ಅಂತ.
 ಪಾಪ ನನ್ನ ಕಂದ ಹೊದಿಕೆ ಹೊದಿಯದೆ ಮಲಗಿದೆ. ನಾನೂ ಮಲಗಿಬಿಡುವೆ. ನನ್ನ ಪುಟ್ಟ ಕಂದನ ಜೊತೆ. ಇಂದು ನಿಶ್ಚಿಂತೆಯಾಗಿ ಮಲಗುವೆ.


   

Labels:

Tuesday, December 2, 2014

ಭಯದ ನೆರಳು

ಶುಭಾ ಗಿರಣಿಮನೆ


ಈ ರಾತ್ರಿ ಯಾಕೋ ತುಂಬ ಭಯ
ಹತ್ತಿರ ಬರುವಿರಾ ಯಾರಾದರೂ
ಎಂದು ಕರೆಯಬೇಕು ಎಂದರೆ
ಯಾರಿದ್ದಾರೆ ನನ್ನ ಕಣ್ಣಳತೆಯಲ್ಲಿ

ಮೂರಂತಸ್ಥಿನ ಭವ್ಯ ಬಂಗಲೆ
ಒಬ್ಬಳೇ ಒಳಗೆ ಇರಲಾರೆ
ಕರೆಂಟು, ಟಿವಿ, ಪೋನ್ ತಯಾರಿಸಿಟ್ಟ ಅಡುಗೆ
ಆಧುನಿಕತೆಗೇನೂ ಕೊರತೆ ಇಲ್ಲ

ಕಣ್ಣು ಮುಚ್ಚಿಮಲಗಿದರೆ
ನಲ್ಲನ ಮುಖ ಕಾಣಿಸದು, ಕರಿ ನೆರಳು ಮಾತ್ರ
ಒಂದೆಡೆ ಕೂರಲಾರೆ, ನಿಲ್ಲಲಾರೆ
ಎದೆಯ ಗೂಡಲ್ಲಿ ಚಳಿಯ ನಡುಕ

ಅಮ್ಮ ಹೇಳಿದ ನೆನಪು ನನ್ನ ಮನದಲ್ಲಿ
ಕ್ರೂರ ಪ್ರಾಣಿಗಳಿಗಿಂತ ಮನುಷ್ಯನೆ ಕೇಡು
ಹತ್ತಿರ ಸುಳಿಯ ಗೊಡಬೇಡ ಒಂಚೂರು
 ಮತ್ತೆ ಬಾರದು ನಿನ್ನ ಒಡಲ ಹಸಿರು

ಹಾ ನೆನಪಾಯಿತು ತಟ್ಟನೆ
ನಾನು ಹೆದರ ಬೇಕಾಗಿದ್ದು ಕತ್ತಲ ರಾತ್ರಿಗಲ್ಲ
ದುರುಳತನವುಳ್ಳ ಮನುಜಗೆ
ಬಾಗಿಲು ಭದ್ರವಾಯಿತು, ನಾನು ಸುಖ ನಿದ್ರೆಗೆ.

Labels: