Tuesday, December 2, 2014

ಭಯದ ನೆರಳು

ಶುಭಾ ಗಿರಣಿಮನೆ


ಈ ರಾತ್ರಿ ಯಾಕೋ ತುಂಬ ಭಯ
ಹತ್ತಿರ ಬರುವಿರಾ ಯಾರಾದರೂ
ಎಂದು ಕರೆಯಬೇಕು ಎಂದರೆ
ಯಾರಿದ್ದಾರೆ ನನ್ನ ಕಣ್ಣಳತೆಯಲ್ಲಿ

ಮೂರಂತಸ್ಥಿನ ಭವ್ಯ ಬಂಗಲೆ
ಒಬ್ಬಳೇ ಒಳಗೆ ಇರಲಾರೆ
ಕರೆಂಟು, ಟಿವಿ, ಪೋನ್ ತಯಾರಿಸಿಟ್ಟ ಅಡುಗೆ
ಆಧುನಿಕತೆಗೇನೂ ಕೊರತೆ ಇಲ್ಲ

ಕಣ್ಣು ಮುಚ್ಚಿಮಲಗಿದರೆ
ನಲ್ಲನ ಮುಖ ಕಾಣಿಸದು, ಕರಿ ನೆರಳು ಮಾತ್ರ
ಒಂದೆಡೆ ಕೂರಲಾರೆ, ನಿಲ್ಲಲಾರೆ
ಎದೆಯ ಗೂಡಲ್ಲಿ ಚಳಿಯ ನಡುಕ

ಅಮ್ಮ ಹೇಳಿದ ನೆನಪು ನನ್ನ ಮನದಲ್ಲಿ
ಕ್ರೂರ ಪ್ರಾಣಿಗಳಿಗಿಂತ ಮನುಷ್ಯನೆ ಕೇಡು
ಹತ್ತಿರ ಸುಳಿಯ ಗೊಡಬೇಡ ಒಂಚೂರು
 ಮತ್ತೆ ಬಾರದು ನಿನ್ನ ಒಡಲ ಹಸಿರು

ಹಾ ನೆನಪಾಯಿತು ತಟ್ಟನೆ
ನಾನು ಹೆದರ ಬೇಕಾಗಿದ್ದು ಕತ್ತಲ ರಾತ್ರಿಗಲ್ಲ
ದುರುಳತನವುಳ್ಳ ಮನುಜಗೆ
ಬಾಗಿಲು ಭದ್ರವಾಯಿತು, ನಾನು ಸುಖ ನಿದ್ರೆಗೆ.

Labels:

0 Comments:

Post a Comment

Subscribe to Post Comments [Atom]

<< Home